Posts

ಅನುಕೂಲಕ್ಕೊಂದೆರಡು ಪ್ರೀತಿ..!-2

Image
  ಅನುಕೂಲಕ್ಕೊಂದೆರಡು ಪ್ರೀತಿ..!-2 ‘ರೂಂ ಅಲ್ಲಿ ಬರೀ ಒಬ್ಳೇ ಕೂತಿರ್ತೀಯಲ್ಲ ಬೇಜಾರಾಗಲ್ವಾ ನಿಂಗೆ? ಉಳ್ದಿದ್ ದಿನ ಆಫೀಸು ಕೆಲ್ಸ ಅಂತಾಗುತ್ತೆ, ಭಾನುವಾರವಾದ್ರು ಆಚೆ ಓಡಾಡ್ಕೋಂಡು ಬರ್ಬಾರ್ದಾ.. ಅಂದ್ರು ಪಿ.ಜಿ ಆಂಟಿ.  ಹೋಗು ಅಂದ್ರೆ ಎಲ್ಲಿಗ್ ಹೋಗದು, ನನ್ಗೆ ಈ ಊರು ಹೊಸ್ದು.. ಆಫೀಸಿಗಾದ್ರೆ ಕ್ಯಾಬ್ ಬರುತ್ತೆ, ಇಲ್ಲಿ ನಾನೊಬ್ಳೆ ಹೋಗ್ಬೇಕು. ನಂಗ್ ಒಟ್ಟಿಗೆ ಆಚೆ ಹೋಗೋ ಅಷ್ಟು ಯಾರು ಸ್ನೇಹಿತ್ರು ಆಗಿಲ್ಲ ಇನ್ನು, ಅಂತ ಸಪ್ಪೆ ಮೋರೆ ಮಾಡ್ಕೊಂಡೆ ಅಂದೆ.  ಆಚೆ ಓಡಾಡಿದ್ರೆ ಸ್ನೇಹಿತ್ರು ಆಗ್ತಾರೆ ನೀನ್ ಕುಡ್ಮಿ ತರ ರೂಂ ಅಲ್ಲೇ ಕೂತ್ರೆ, ಬೆಂಗಳೂರಿಗೆ ಬಂದು ಎರಡ್ ತಿಂಗ್ಳಾಯ್ತು ಈಗ್ಲು ಹೊಸ ಊರೇನೆ ಇದು..? ನಿನ್ ಅಮ್ಮ ಹೇಳದ್ದು ಸರಿ ನೀನ್ ಯಾರ್ ಜೊತೆನು ಹೊಂದಲ್ಲ, ಅಂದ್ರು.  ಹು.. ಹೇಳ್ತರೆ, ಹೇಳ್ದೆ ಏನ್ ಮಾಡ್ತಾರೆ ಇಷ್ಟು ದಿನ ಓದು ಓದು ಅಂತ, ಬರಿ ನನ್ನ ಪುಸ್ತಕದ ಹುಳು ಮಾಡಿದ್ದು ಅವ್ರೆ. ಈಗ ಇದ್ದಕ್ಕಿದ್ದಂತೆ ಎಲ್ಲರೊಟ್ಟಿಗು ಬೆರಿ ಅಂದ್ರೆ ಹೇಗಾಗುತ್ತೆ! ಅಂತ ಮನಸ್ಸಿನಲ್ಲೇ ಬೈಕೊತಿರ್ಬೇಕಾದ್ರೆ,  ಸರಿ ಬಾ ತಿಂಡಿ ತಿನ್ನು ಅಂದ್ರು ಆಂಟಿ. ತಿಂಡಿ ತಿಂದು ಮಲಗಿದವಳಿಗೆ ಸಂಜೆ ನಾಲ್ಕಕ್ಕೆ ಎಚ್ಚರವಾಗಿದ್ದು. ಛೇ ಎಷ್ಟೊತ್ ನಿದ್ದೆ ಮಾಡ್ದೆ ಅಂತ ಎದ್ದು, ಮುಖಕ್ಕೆ ನೀರು ಎಂದೆರಡು ಬೊಗಸೆ ನೀರು ಎರಚಿ ಹೋಗಿ ಆಂಟಿನ ನೋಡಿದ್ರೆ ಅವ್ರು ಮಲ್ಗಿದ್ರು. ಇಡೀ ಪಿ.ಜಿ ಗೆ ನಾನೊಬ್ಳು ಎಲ್ಲರು ಟ್ರಿಪ್ಪು, ಔಟಿಂಗ್, ಪಾರ್ಟಿ ಅಂತ ಹೋಗಿದ್ದಾರೆ

ಅನುಕೂಲಕ್ಕೊಂದೆರಡು ಪ್ರೀತಿ...!

Image
ಮೊನ್ನೆ ಯಾವ್ದೊ ಕೆಲ್ಸದ ಮೇಲೆ ಬೆಂಗಳೂರಿಗೆ ಹೊಗ್ಬೆಕಾಗಿ ಬಂತು. ನನ್ಗೆ ಬೆಂಗ್ಳೂರಂದ್ರೆ ಒಂತರ ಬೇಜಾರು ಅಲ್ಲಿಯ ಹೊಗೆ, ಜನ ಸಂದಣಿ, ಟ್ರಾಫಿಕ್ ನೋಡಿದ್ರೆ ಅಲ್ಲಿಗ್ಯಾಕಾರು ಹೋಗ್ಬೇಕಪ್ಪ ಅನ್ಸೋದು ಒಂದ್ ಕಡೆಯಾದ್ರೆ, ಹಾಸನ ಬಿಟ್ಟು ಹೋಗೊದಂದ್ರೆ ಒಂತರ ಅನಾಥ ಭಾವ. ಮೊದ್ಲಿಂದ್ಲು ನಂಗೆ ಪ್ರಯಾಣ ಅಷ್ಟಕ್ಕಷ್ಟೇ. ಮನಸ್ಸಿಗೆ ಬೇಜಾರಾದಾಗ ಪ್ರಯಾಣ ಮಾಡಿದ್ರೆ ಸ್ವಲ್ಪ ನೆಮ್ದಿ ಸಿಗುತ್ತೆ ಅಂತ ಎಲ್ಲ ಹೇಳ್ತಾರೆ, ಆದ್ರೆ "ನನ್ನೂರಿನ, ನನ್ನ ಮನೆಯ, ನನ್ನ ಕೋಣೆಯ,ನನ್ನ ಹಾಸಿಕೆಯ ಮೂಲೆಯಲ್ಲಿ ಸಿಗದ ನೆಮ್ದೀ ಬೇರೆಲ್ಲೋ ಎಲ್ ಸಿಗುತ್ತೆ ಅನ್ನೊ ವಾದ ನನ್ದೂ...." ಅದ್ ಬಿಡಿ, ಅಂತು ಇಂತು ಎರಡ್ ದಿನಕ್ ಬೇಕಾದ ಬಟ್ಟೆ ಬರೆ ಜೋಡಿಸಿ, ಕೆಲಸಕ್ಕೆ ಬೇಕಾದ ಫೈಲ್ ಗಳನ್ನ ಎತ್ತಿಟ್ ಕೊಂಡು, ಬೆಳಗ್ಗೆ ಬೇಗ ಏಳಲು ಸಿದ್ಧವಾಗಿ ನಿದ್ದೆಗೆ ಜಾರಿದೆ. ಅದ್ಯಂತ ಫೋನಲ್ಲಿ ಅಲರಾಮ್ ಇಟ್ರು ನಂಗ್ ಅಪ್ಪ ಕೂಗೋ ಕೂಗಿಗೆ ಎಚ್ರ ಆಗದು. ಅಪ್ಪ: ಪುಟ್ಟು ನೋಡು ಈಗಾಗ್ಲೇ 5:15, 5:30 ಕ್ಕೆ ಬಸ್ಸು, ಸುಮ್ನೇ ಕೆಂಪ್ ಬಸ್ಸಲ್ ಹೋಗಕ್ ಆಗ್ದೇ ಐರಾವತ‌ ಬೇರೆ ಬುಕ್ ಮಾಡಿದ್ಯಾ... ನೋಡೀಗ ಅದ್ ಹೋಗುತ್ತೆ.... ನಾನು: ಆ........ ಇಷ್ಟ್ ಬೇಗ 5:15 ನಾ.... ಅಲಾರಾಮ್ ಹೊಡ್ದಿದ್ದೇ ಕೇಳಿಸ್ಲಿಲ್ಲಾ...... (ಪಕ್ಕದಲ್ಲಿದ್ದ ಫೋನ್ ತಗಂಡ್ ನೋಡಿದ್ರೆ ಇನ್ನು 4:15) ಅಪ್ಪ ಯಾಕ್ ಇಷ್ಟ್ ಬೇಗ ಎಬ್ರುಸ್ದೇ...... ಹೇ...... ಆ...... ನಿಂದೊಂದ್ ಕಾಟ..... ಅಪ್ಪ:

ಪ್ರತ್ಯಕ್ತೆ...

Image
ಪ್ರತ್ಯಕ್ತೆ ಪ್ರೀತಿಸುವವರೆಲ್ಲ ಪ್ರೇಮಿಗಳಲ್ಲ , ಪ್ರೀತಿಸುವ ಕಲೆಯನ್ನು ತಿಳಿದವರು ನಿಜವಾದ ಪ್ರೇಮಿ ..!         ಅಂದು ಯಾಕೋ ಮನಸ್ಸು ಬೇರೇನನ್ನೂ ಬಯಸುತ್ತಿತ್ತು , ಒಂದು ಅತ್ಯದ್ಭುತ ಏಕಾಂತ ನನ್ನಲ್ಲೇ ಸೃಷ್ಟಿಯಾಗಿತ್ತು. ಯಾಕೋ ಅಂದು ಓದು ಬೇಡವಾಗಿತ್ತು, ಯಾರನ್ನು ಭೇಟಿಯಾಗಲು ಮನಸ್ಸಿಲ್ಲ , ಯಾರ ಮಾತು ಕೇಳಲು ತಾಳ್ಮೆಯಿಲ್ಲ , ಯಾರನ್ನು ಅರ್ಥ ಮಾಡಿಕೊಳ್ಳಲು ಇಷ್ಟವಿಲ್ಲ . ಯಾಕೋ ನನ್ನ ಏಕಾಂತದಲ್ಲಿ ಬೇರೆ ಏನೋ ಅಥವಾ ಯಾರೋ ಬೇಕು ಅನಿಸಿತ್ತು . ಆದರೆ ಯಾರನ್ನು ಕರೆಯೋದು ? ಎಲ್ಲರೂ ಅವರದ್ದೇ ಓಟ ಓಡುತ್ತಿದ್ದಾರೆ, ಯಾರಿಗೂ ನಿಂತು ಬೇರೆಯಾರ ಕಷ್ಟ , ನಷ್ಟ , ಬೇಜಾರು ಕೇಳುವ ತಾಳ್ಮೆ , ಸಮಯ ಎರಡು  ಇ ಲ್ಲ . ಹಾಗೂ ಕಷ್ಟಪಟ್ಟು ನಮ್ಮ ಮಾತುಗಳನ್ನ ಅವರಲ್ಲಿ ತುರುಕಿದರೆ ಅವರಿಗೆ ಅದೆಷ್ಟು ಅರ್ಥವಾಗುವುದೋ ಗೊತ್ತಿಲ್ಲ ...! ಅರ್ಥವಾದಷ್ಟೆ ಸತ್ಯ ...! ಅರ್ಥವಾಗದನ್ನು ಅವರೇ ಊಹಿಸಿ ಜಾತಕ ಬರೆಯೋರೆ ಹೆಚ್ಚು ..! ಇದೆಲ್ಲಕ್ಕಿಂತ ಯಾರಿಗೂ ಅರ್ಥವಾಗದೇ ಉಳಿಯೋದೇ ಲೇಸು …   ಈ ಏಕಾಂತಕ್ಕೆ ಹಲವು ಸ್ಥಿತಿಗಳು . ಆದರೆ ಅಂದು ನನ್ನ ಏಕಾಂತ  ಮಾರ್ಕ್ ಜೂಕರ್ ಬರ್ಗ್  ನನ್ನು ಆಯ್ದಿತ್ತು . ಬಹಳ ದಿನಗಳ ಬಳಿಕ ನನ್ನ  ಫೇಸ್ಬುಕ್   ಖಾತೆ   ನೋಡಬೇಕೆನಿಸಿ  ಲಾಗಿನ್ ಮಾಡಿದೆ . ಎಷ್ಟೋ ದಿನದಿಂದ ನೋಡದೇ ಉಳಿದ  ಹಾಯ್ , ಹೆಲ್ಲೊ, ಗುಡ್