Posts

Showing posts from November 29, 2015

ನೆನಪುಗಳ ಮಾತು ಮಧುರ...

Image
                                      ನೆನಪುಗಳ ಮಾತು ಮಧುರ... ನೆನಪುಗಳೇ ಹಾಗೆ ಯಾವಾಗ ಬೇಕೆಂದರಲ್ಲಿ ತನ್ನ ಬುತ್ತಿ ಬಿಚ್ಚಿ ಕೂತುಬಿಡುತ್ತವೆ. ಅದಕ್ಕೆ ಯಾರ ಅಪ್ಪಣೆ ನಿರಾಕರಣೆಗಳ ಹಂಗಿಲ್ಲ. ಅದರಲ್ಲಿ ಕೆಲವು ನೆನಪುಗಳು ಖುಷಿ ಕೊಡುವುದಾದರೆ, ಕೆಲವು ನೋವು-ಹಿಂಸೆಯನ್ನು, ಇನ್ನೂ ಕೆಲವು ನಮ್ಮ ಮನಸ್ಸಿನಾಳದಲ್ಲಿ ಇತ್ತ ಸಂತೋಷದ ನೆನಪು ಆಗದೆ, ದುಃಖದ ನೆನಪು ಆಗದೆ ದ್ವಂದ್ವಾವಸ್ಥೆಯಲ್ಲೇ ಉಳಿದುಬಿಡುತ್ತವೆ. ಆ ನೆನಪುಗಳನ್ನು ಬಿಸಿತುಪ್ಪದಂತೆ ಮರೆಯುವುದು ಕಷ್ಟ ನೆನಸಿಕೊಂಡರಂತು ಇನ್ನು ಕಷ್ಟ. ಇದರಿಂದ ಮನಸ್ಸು ಒಂದು ಹುಚ್ಚು ಮನಸ್ಥಿಗೆ ಜಾರುವುದಂತು ಕಚಿತ. ಕೆಲವು ನೆನಪುಗಳನ್ನು ಯಾರೊಟ್ಟಿಗೂ ಹಂಚಿಕೊಳ್ಳಲಾಗದೆ ಇತ್ತ ಅನುಭವಿಸಲು ಆಗದೆ ಪರದಾಡುವ ಸ್ಥಿತಿ ಯಾವ ಶತ್ರುಗಳಿಗೂ ಬೇಡ. ಹಾಗೆ ಎಲ್ಲರ ಬದುಕಲ್ಲೂ ಇಂತಹ ನೆನಪು ಇದ್ದೇ ಇರುತ್ತದೆ, ಅವು ನಮ್ಮ ಬದುಕಿನಲ್ಲಿ ಯಾರು ಉತ್ತರಿಸಲಾಗದ ಪ್ರಶ್ನೆಗಳನ್ನು ಗೊಂದಲಗಳನ್ನು ಸೃಷ್ಟಿಸಿರುತ್ತವೆ. ಅದೇ ರೀತಿ ಎಲ್ಲರ ಜೀವನದಲ್ಲೂ ಒಂದು ಹೆಸರಿಡದ ಸಂಭದ ಇರುತ್ತದೆ. ಈ ರೀತಿ ನನ್ನ ಕಾಡಿದ, ಕಾಡುತ್ತಿರುವ ಒಂದು ನೆನಪು ಇಲ್ಲಿದೆ... ನಿಮಗೆ ಉತ್ತರ ಸಿಕ್ಕರೆ ನನಗೆ ತಿಳಿಸಿ. ನನಗೆ ಮೊದಲಿನಿಂದಲು ಭಾವಗೀತೆಗಳೆಂದರೆ ಪಂಚಪ್ರಾಣ, ಪ್ರತಿ ಹೂವಿನ ಸಂಭಾಷಣೆ ಕೇಳುವುದು ಚಿಟ್ಟೆಗೆ ಮಾತ್ರ, ಪ್ರತಿ ಮೀನಿನ ಚೆಲ್ಲಾಟ ಕಾಣುವುದು ಮುಳುಗುವ ಅಲೆಗೆ ಮಾತ್ರ ಎನ್ನುವ ಹಾಗೆ ಪ್ರತಿ ಭಾವಗೀತೆಯ ಭಾವ ಅರ